English Home page / ಕನ್ನಡ ಮುಖ ಪುಟ

ಕೆ.ಟಿ.ಬಿ.ಎಸ್ ಕುರಿತು

1. ಪಠ್ಯಪುಸ್ತಕ ಸಂಘದ ರಚನೆ:

ಕರ್ನಾಟಕ ಪಠ್ಯಪುಸ್ತಕ ಸಂಘವು ದಿನಾಂಕ 01.04.2006 ರಂದು ಅಸ್ತಿತ್ವಕ್ಕೆ ಬಂದಿತು. ಸಂಘವುಸರ್ಕಾರಿ ಆದೇಶ ಸಂಖ್ಯೆ ಇಡಿ 95 ಡಿಜಿಒ 2005, ಬೆಂಗಳೂರು ದಿನಾಂಕ 04.01.2006 ರ ಅನ್ವಯ ಸರ್ಕಾರ ಅನುಮೋದಿಸಿದ ಶಾಲಾ ಪಠ್ಯಪುಸ್ತಕಗಳ ತಯಾರಿಕೆ, ಮುದ್ರಣ ಹಾಗೂ ಸರಬರಾಜಿಗೆ ಸಂಬಂಧಿಸಿದಂತೆ ಒಂದು ಅಂಗ ಸಂಸ್ಥೆಯೆಂದು ಘೋಷಿಸಲ್ಪಟ್ಟಿದೆ. ಇದನ್ನು ಸಂಘದ ರೂಪದಲ್ಲಿ ಒಂದು ಸ್ವಾಯತ್ತ ಸಂಸ್ಥೆ ಇರಬೇಕೆಂಬ ಕೆ. ಪಿ .ಸುರೇಂದ್ರನಾಥ ಸಮಿತಿ ಶಿಫಾರಸ್ಸಿನಂತೆ ರಚಿಸಲಾಗಿದೆ. ಸಂಘಗಳ ನೊಂದಣಿ ಕಾಯಿದೆ 1966 ನ ಪ್ರಕಾರ ಸಂಗವನ್ನು ದಿನಾಂಕ 12.05.2006 ರಂದು ನೊಂದಾಯಿಸಲಾಗಿದೆ.

ಈ ಸಂಘವು ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಗಳ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿರುವುದರಿಂದ ತ್ವರಿತವಾದ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಉಚಿತ ಮತ್ತು ಮಾರಾಟದ ಪುಸ್ತಕಗಳನ್ನು ಸಮರ್ಥವಾಗಿ ವಿತರಿಸಲು ಅನೂ ಕೂಲವಾಗಿದೆ .

2. ನೂತನ ಪಠ್ಯಕ್ರಮದೆಡೆಗೆ - ನೂತನ ಪಠ್ಯಪುಸ್ತಕಗಳು

ಮಾನವನ ಅನುಭವದಲ್ಲಿ ಸಕಲ ಕ್ಷೇತ್ರಗಳಲ್ಲೂ ಜ್ಞಾನವು ನಮ್ಮ ನಿರೀಕ್ಷಣೆಗಿಂತ ವೇಗವಾಗಿ ಹೆಚ್ಚುತ್ತಿರುವುದರಿಂದ ಹಾಗೂ ಸಾಮಾಜಿಕ ಹಾಗೂ ರಾಷ್ಟ್ರೀಯ ಆಶೋತ್ತರಗಳು ಬದಲಾಗುತ್ತಿರುವ ಈ ಸಂದರ್ಭದಲ್ಲಿ ಶಿಕ್ಷಣ ಕ್ರಮವು ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಪ್ರಗತಿಯ ಲಕ್ಷಣ. ಇಂದು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿ ಅಸಾಧಾರಣ ಗತಿಯಲ್ಲಿ ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಶಿಕ್ಷಣದಲ್ಲಿ ಸೂಕ್ತ ಬದಲಾವಣೆಗಳನ್ನು ತರುವುದು ಅನಿವಾರ್ಯವಾಗಿದೆ. ಆದ್ದರಿಂದ ಕರ್ನಾಟಕ ಸರ್ಕಾರವು ಓಅಈ 2005 ಮಾಡಿರುವ ಶಿಫಾರಸುಗಳ ಆಧಾರದಲ್ಲಿ ಕರ್ನಾಟಕ ಸರ್ಕಾರವು ಏಅಈ 2007 ನೂತನ ಪಠ್ಯಕ್ರಮವನ್ನು ಜಾರಿಗೆ ತಂದಿದೆ. ಶಾಲೆಯ ಹೊರಗಿನ ಬದುಕಿಗೆ ಜ್ಞಾನ ಸಂಯೋಜನೆ, ಜ್ಞಾನದ ಅಭಿವೃದ್ಧಿಗೆ ಕಲಿಕಾ ಅನುಭವಗಳನ್ನು ಬಳಸುವುದು, ಮಕ್ಕಳು ಸಂತಸದಿಂದ ಕಲಿಯುವುದು, ಕಲಿಕೆ ಪಠ್ಯಪುಸ್ತಕ ಕೇಂದ್ರಿಕೃತವಾಗದಂತೆ ಮಕ್ಕಳ ಒಟ್ಟಾರೆ ಬೆಳವಣಿಗೆಗೆÉ ಪ್ರೇರಕವಾಗುವುದು, ಮತ್ತು ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿ ಪಡಿಸುವಂತಹ ಎನ್‍ಸಿಎಫ್ ನ ಅಂಶಗಳನ್ನಾಧರಿಸಿ ನೂತನ ಪಠ್ಯಪುಸ್ತಕಗಳನ್ನು ತಯಾರಿಸಲಾಗಿದೆ.

ಪಠ್ಯಪುಸ್ತಕಗಳ ರಚನೆಯು ಬಹುಹಂತಗಳ ಕಾರ್ಯವಾಗಿದೆ. ಪಠ್ಯಪುಸ್ತಕಗಳನ್ನು ವಿವಿಧ 12 ಭಾಷೆಗಳಲ್ಲಿ ತಯಾರಿಸಲಾಗುತ್ತದೆ. ರಚನೆಯ ನಂತರ ಈ ಪಠ್ಯಪುಸ್ತಕಗಳನ್ನು ರಾಜ್ಯದ ಎಲ್ಲಾ ಡಯಟ್ ಹಾಗೂ ಸಿಟಿಇಗಳಿಗೆ ಕಳುಹಿಸಿ ಶಿಕ್ಷಣ ತಜ್ಞರಿಂದ, ಶಿಕ್ಷಕರುಗಳಿಂದ ಮತ್ತು ಪೋಷಕರಿಂದ ಸಲಹೆಗಳನ್ನು ಪಡೆಯಲಾಗುತ್ತದೆ. ಕರ್ನಾಟಕ ಸರ್ಕಾರ ನೇಮಿಸುವ ವಿವಿಧ ವಿಷಯದಲ್ಲಿ ತಜ್ಞರನ್ನೊಳಗೊಂಡ ಸಂಪಾದಕೀಯ ಮಂಡಳಿಯು ಸಹ ಕೂಲಂಕುಷವಾಗಿ ಪರಿಶೀಲಿಸಿ ನೀಡುವ ವರದಿಯ ಅಂಶಗಳನ್ನೂ ಸೇರಿಸಿ ಪಠ್ಯಪುಸ್ತಕಗಳನ್ನು ಅಂತಿಮವಾಗಿ ಪರಿಷ್ಕರಿಸಲಾಗುವುದು.

3. ವಿಶಾಲ ವ್ಯಾಪ್ತಿ

ಕರ್ನಾಟಕದಲ್ಲಿರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 10 ನೇ ತರಗತಿಗಳ ಸುಮಾರು 100 ಲಕ್ಷ ಮಕ್ಕಳಿಗೆ ಕರ್ನಾಟಕ ರಾಜ್ಯದ ಪಠ್ಯವಸ್ತುವನ್ನು ಆಧರಿಸಿರುವ ಪಠ್ಯಪುಸ್ತಕಗಳ ತಯಾರಿಕೆ, ಮುದ್ರಣ ಹಾಗೂ ಸರಬರಾಜಿನ ಜವಾಬ್ದಾರಿಯು ಸಂಘದ್ದಾಗಿದೆ. ಪಠ್ಯಪುಸ್ತಕಗಳನ್ನು ಉಚಿತ ಹಾಗೂ ಮಾರಾಟ ಎಂಬ ಎರಡು ವಿಭಾಗಗಳಲ್ಲಿ ಮುದ್ರಿಸಲಾಗುತ್ತದೆ. ಎಲ್ಲಾ ಉಚಿತ ಪಠ್ಯಪುಸ್ತಕಗಳು ಸರ್ಕಾರಿ ಶಾಲೆಗಳಿಗೆ ಸೀಮಿತವಾಗಿವೆ. ಈ ಪಠ್ಯಪುಸ್ತಕಗಳನ್ನು 12 ಭಾಷೆಗಳಲ್ಲಿ ಹಾಗೂ 7 ಮಾಧ್ಯಮಗಳಲ್ಲಿ ತಯಾರಿಸಲಾಗುತ್ತಿದೆ. ಸಂಘವು ಸುಮಾರು 358 ಶೀರ್ಷಿಕೆಗಳನ್ನು ತಯಾರಿಸಿ, ಮುದ್ರಿಸುತ್ತದೆ.

4. ವಿಸ್ತøತ ಚಟುವಟಿಕೆಗಳು

ಸರ್ವ ಶಿಕ್ಷಣ ಅಭಿಯಾನವು ಕರ್ನಾಟಕ ರಾಜ್ಯದ ಅನುದಾನಿತ ಶಾಲೆಗಳ 1 ರಿಂದ 8 ನೇ ತರಗತಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳ ಖರ್ಚನ್ನು ಭರಿಸುತ್ತದೆ. 2011-12 ನೇ ಸಾಲಿನಿಂದ ಅನುದಾನಿತ ಶಾಲೆಗಳ 9 ಮತ್ತು 10 ನೇ ತರಗತಿ ಮಕ್ಕಳಿಗೂ ಉಚಿತ ಪಠ್ಯಪುಸ್ತಕಗಳನ್ನು ವಿತರಿಸುವ ಯೋಜನೆಯನ್ನು ಜಾರಿಗೆ ತಂದಿತು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಭಾಷೆಗಳು, ವಿಜ್ಞಾನ ಮತ್ತು ಗಣಿತ ಪಠ್ಯಪುಸ್ತಕಗಳನ್ನು ಸಹ ಸಂಘವು ಮುದ್ರಿಸುತ್ತದೆ. ಸರ್ವ ಶಿಕ್ಷಣ ಅಭಿಯಾನದ ನೂತನ ಯೋಜನೆಯಡಿಯಲ್ಲಿ ಪಠ್ಯಪುಸ್ತಕಗಳಿಗೆ ಪೂರಕವಾಗಿ ಅಭ್ಯಾಸ ಪುಸ್ತಕಗಳನ್ನು ಹಾಗೂ ಶಿಕ್ಷಕರಿಗೆ ಸಂಪನ್ಮೂಲ ಪುಸ್ತಕಗಳನ್ನು ಕೂಡಾ ಸಂಘವು ತಯಾರಿಸಿ, ಮುದ್ರಿಸುತ್ತಿದೆ.

5. ಮುದ್ರಣದಲ್ಲಿ ಪಾರದರ್ಶಕತೆ

ಈ ಪಠ್ಯಪುಸ್ತಕಗಳ ಮುದ್ರಣದಲ್ಲಿ ಪ್ರಮಾಣೀಕರಿಸಿದ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಸಂಘವು ಕೆಟಿಟಿಪಿ ಕಾಯಿದೆಯನ್ನು ಅನುಸರಿಸಿ, ರಾಜ್ಯದ ಎಲ್ಲಾ 204 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಮುದ್ರಿತ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲು ರಾಷ್ಟ್ರ ಮಟ್ಟದ ಟೆಂಡರ್‍ನ್ನು ಕರೆಯಲಾಗುತ್ತದೆ. ಅರ್ಹ ಮುದ್ರಕರು ಟೆಂಡರ್ ನಲ್ಲಿ ಭಾಗವಹಿಸುತ್ತಾರೆ. ಕೆಟಿಟಿಪಿ ಕಾಯಿದೆಯಲ್ಲಿರುವ ನಿಯಮಗಳನ್ನು ಅನುಸರಿಸಿ ಹಾಗೂ ಸಾಮಥ್ರ್ಯ ಮತ್ತು ದರಗಳನ್ನಾಧರಿಸಿ ಭಾಗವಹಿಸಿರುವ ಬಿಡ್‍ದಾರರಲ್ಲಿ ಅರ್ಹ ಮುದ್ರಕರನ್ನು ಸಂಘವು ಪಾರದರ್ಶಕ ವಿಧಾನವನ್ನು ಅನುಸರಿಸಿ ಗುರುತಿಸುತ್ತದೆ.

6. ಸಮರ್ಪಕ ವಿತರಣಾ ವಿಧಾನದಿಂದ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ತಲುಪಿಸುವುದು

ಸಾಮಾನ್ಯವಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಹಿಂದಿನ ಆಥಿಕ ವರ್ಷದಿಂದಲೇ ಪ್ರಾರಂಭಿಸಲಾಗುತ್ತದೆ.ಪಠ್ಯಪುಸ್ತಕಗಳ ಮುದ್ರಣವನ್ನು ಪ್ರಾರಂಭಿಸುವ ಮುನ್ನ ಸರ್ಕಾರಿ ಶಾಲೆಗಳಲ್ಲಿ, ಅನುದಾನಿತ ಶಾಲೆಗಳಲ್ಲಿ ಹಾಗೂ ಅನುದಾನರಹಿತ ಶಾಲೆಗಳಲ್ಲಿ ತರಗತಿಗಳಲ್ಲಿ ಓದುತ್ತಿರುವ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಾಗುವ ಪಠ್ಯಪುಸ್ತಕಗಳ ಅಂಕಿ ಅಂಶಗಳನ್ನು ಜಿಲ್ಲೆಗಳ 34 ಉಪನಿರ್ದೇಶಕರ ಮೂಲಕ 204 ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆಯಲಾಗುತ್ತದೆ. ಇದರ ಪ್ರಕಾರ ಪಠ್ಯಪುಸ್ತಕಗಳನ್ನು ಮುದ್ರಿಸಿ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತಲುಪಿಸಲಾಗುವುದು.